ಇನಾಂ ಜಮೀನು ತೀರ್ಪು; ನಮ್ಮ ರಾಜ್ಯಕ್ಕೆ ಸಂಬಂಧ ಪಡುವುದಿಲ್ಲ: ಕೆ.ಎನ್.ರಂಗಸ್ವಾಮಿ
Nov 28 2024, 12:33 AM ISTಇನಾಂ ಜಮೀನಿಗೆ ದೇವಸ್ಥಾನದ ಅರ್ಚಕರು ಒಡೆಯನಲ್ಲ. ದೇವರೇ ಒಡೆಯ ಎಂದು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ. ಈ ಆದೇಶ ನಮ್ಮ ರಾಜ್ಯದ ಇನಾಂ ಜಮೀನಿಗೆ ಸಂಬಂಧ ಪಡುವುದಿಲ್ಲ. ಇನಾಂ ಜಮೀನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಮೈಸೂರು, ಹೈದರಾಬಾದ್ ಕರ್ನಾಟಕ, ಬಾಂಬೆ, ಹಳೇ ಮೈಸೂರು ಹಾಗೂ ಮದ್ರಾಸ್ ಎಂಬ ಐದು ಕಾಯ್ದೆಗಳು ಜಾರಿಯಲ್ಲಿವೆ.