ದರಖಾಸ್ತು ಜಮೀನು ಮೂಲ ವಾರಸುದಾರರಿಗೆ ವಾಪಸ್‌ ಕೊಡಬೇಕು: ಕಂದೇಗಾಲ ಶ್ರೀನಿವಾಸ್‌

Dec 30 2024, 01:00 AM IST
ಚಿಕ್ಕಮಗಳೂರು, ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಮಂಜೂರು ಮಾಡಿರುವ ದರಖಾಸ್ತು, ಬಗರ್‌ಹುಕುಂ ನಂತಹ ಯಾವುದೇ ರೀತಿಯ ಜಮೀನುಗಳು ಪ್ರಭಾವಿಗಳು, ಮೇಲ್ವರ್ಗದವರಿಂದ ಕಬಳಿಕೆ, ಖರೀದಿಯಾಗಿದ್ದರೇ ಅಂತಹ ಜಮೀನುಗಳನ್ನು ಮೂಲ ವಾರಸುದಾರರು ಮರಳಿ ತಮ್ಮ ವಶಕ್ಕೆ ಪಡೆಯಲು ಅನುವಾಗುವಂತಹ ಕಾಯ್ದೆ 2023ರಲ್ಲಿ ಜಾರಿಯಾಗಿದೆ. ಈ ಕಾನೂನಿನ ಬಗ್ಗೆ ಅರಿವಿಲ್ಲದಿರುವುದು, ಕಾನೂನು ಹೋರಾಟದ ಬಗ್ಗೆ ಮಾಹಿತಿ ಕೊರತೆಯಿಂದ ಶೋಷಿತ ಸಮುದಾಯದವರಿಗೆ ಜಮೀನು ಧಕ್ಕದಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾನೂನು ಅರಿವು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಹೈಕೋರ್ಟ್‌ ವಕೀಲರು ಹಾಗೂ ಎಐಕೆಕೆಎಸ್ ಅಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಹೇಳಿದರು.