ಸ್ಮಶಾನಕ್ಕಾಗಿ ಜಮೀನು ಕಾಯ್ದಿರಿಸಲು ಸಾರ್ವಜನಿಕರ ಆಗ್ರಹ
May 19 2025, 12:03 AM ISTತಾಲೂಕಿನ ಹಿರಾಳು ಗ್ರಾಮದಲ್ಲಿ ಈಗಿರುವ ಸ್ಮಶಾನ ಜಾಗವು ಕೆರೆಯ ಪಕದಲ್ಲಿದೆಯಲ್ಲದೆ, ಅಲ್ಲಿಗೆ ಗ್ರಾಮದ ಚರಂಡಿ ನೀರು ಹರಿದು ಬಂದು ನಿಲ್ಲುತ್ತದೆ. ಇದರಿಂದ, ಈಗಿರುವ ಸ್ಮಶಾನ ಜಾಗದಲ್ಲಿ ಮೃತದೇಹ ಹೂಳಲು ತೊಂದರೆಯಾಗುತ್ತಿದೆ. ಆದ್ದರಿಂದ, ಗ್ರಾಮದಲ್ಲಿ ಸ್ಮಶಾನಕ್ಕಾಗಿ ಗುರುತಿಸಿರುವ ಹೊಸ ಜಮೀನನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸಲು ಅಧಿಕಾರಿಗಳನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.