ಜೆಡಿಎಸ್ ಮದ್ದೂರು ತಾಲೂಕು ಅಧ್ಯಕ್ಷರಾಗಿ ದಿವ್ಯ ರಾಮಚಂದ್ರೆಟ್ಟಿ ಆಯ್ಕೆ
Mar 28 2024, 12:48 AM ISTಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಡಿ.ರಮೇಶ್ ಆದೇಶ ಹೊರಡಿಸಿದ್ದು, ಮಾಜಿ ಸಚಿವ ಡಿ.ಸಿ.ತಮ್ಮಣ್ಣರ ಮಾರ್ಗದರ್ಶನದಂತೆ ನಾನು ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಪಕ್ಷಕ್ಕೆ ಯಾವುದೇ ಚ್ಯುತಿಬಾರದ ರೀತಿಯಲ್ಲಿ ನಡೆದುಕೊಳ್ಳುವುದಾಗಿ ದಿವ್ಯ ರಾಮಚಂದ್ರೆಟ್ಟಿ ಭರವಸೆ ನೀಡಿದರು.