ಪಾದಯಾತ್ರೆಯೊಂದಿಗೆ ‘ಜೆಡಿಎಸ್ ಅಂತಿಮಯಾತ್ರೆ’: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Jan 31 2024, 02:20 AM ISTಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯೊಂದಿಗೆ ಜೆಡಿಎಸ್ ಅಂತಿಮಯಾತ್ರೆಯೂ ನಡೆದಿದೆ. ಅಲ್ಲಿಗೆ ಪ್ರಾದೇಶಿಕ ಪಕ್ಷದ ಸಮಾಧಿಯೂ ಆದಂತಾಗಿದೆ. ಕುಮಾರಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಿರೆ ನೋವಾಗುತ್ತಿರಲಿಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥ ರಾಜಕೀಯ ಸಾಧನೆಗೆ ಜಯಪ್ರಕಾಶ್ ನಾರಾಯಣ್, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್.ಪಟೇಲ್ರಂಥವರು ಪ್ರಾದೇಶಿಕ ಪಕ್ಷದ ಉಳಿವಿಗೆ ನಡೆಸಿದ ಹೋರಾಟಕ್ಕೆ ತಿಲಾಂಜಲಿ ಹಾಡಿರುವುದು ತೀವ್ರ ನೋವುಂಟುಮಾಡಿದೆ.