ಟಿಕೆಟ್ ಫೈನಲ್ ಗೊಂದಲ : ಎಲ್ಲರ ಚಿತ್ತ ದೆಹಲಿಯತ್ತ
Mar 13 2024, 02:05 AM ISTಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯಲ್ಲಿ ಯಾರಿಗೆ ಸಿಗುತ್ತೆ ? ಕಾಂಗ್ರೆಸ್ನಲ್ಲಿ ಯಾರಿಗೆ ಟಿಕೆಟ್ ? ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಎಲ್ಲರ ಚಿತ್ತ ದೆಹಲಿಯತ್ತ ಇದೆ. ಆದರೆ, ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿ ಊಹಿಸಲು ಸಾಧ್ಯವೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಜಿಲ್ಲೆಯಲ್ಲಿ ಜನ್ಮ ತಾಳಿದ ಗೋ ಬ್ಯಾಕ್ ಚಳುವಳಿ. ಇದು, ಕಮಲ ಮಾತ್ರವಲ್ಲ, ಕೈಗೂ ಸುತ್ತಿಕೊಂಡಿತ್ತು. ಹೀಗಾಗಿ ಈ ಎರಡು ಪಕ್ಷಗಳು ಯಾರಿಗೆ ಮಣೆ ಹಾಕುತ್ತವೆ ಎಂಬ ಕುತೂಹಲ ಮೂಡಿದೆ.