ಹಂಪಿಯಲ್ಲಿ ಪ್ರವಾಸಿಗರಿಗೆ ಟಿಕೆಟ್ ಕಿರಿಕಿರಿ
Nov 27 2023, 01:15 AM ISTಹಂಪಿಯ ಕಮಲ ಮಹಲ್, ಕಮಲಾಪುರದ ಬಳಿಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ವಿಜಯ ವಿಠ್ಠಲ ದೇಗುಲದ ಬಳಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಕೌಂಟರ್‌ಗಳ ಬಳಿ ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಸರದಿ ಸಾಲಿನಲ್ಲಿ ನಿಂತು ಪ್ರವಾಸಿಗರು ಟಿಕೆಟ್ ಪಡೆಯುವ ಸ್ಥಿತಿ ಇರುತ್ತದೆ. ಈ ಕೌಂಟರ್‌ಗಳ ಬಳಿ ಪ್ರವಾಸಿಗರ ಸಂಖ್ಯೆಗಳನ್ನು ಗಮನಿಸಿ ತಲಾ ಒಂದೊಂದು ಹೆಚ್ಚುವರಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.