ಕಾವೇರಿ ನದಿಗೆ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರೆದಿದ್ದು, ಸೋಮವಾರ ಸಂಜೆ ವೇಳೆಗೆ ಅದು ತನ್ನ ಪೂರ್ಣಮಟ್ಟವಾದ 120 ಅಡಿ ತಲುಪುವ ಸಾಧ್ಯತೆ ಇದೆ.