ತುಮಕೂರು: ಮರೆಯಾದ ಹಳ್ಳಿ ಸೊಗಡಿನ ಸಂಸ್ಕೃತಿ ಮರುಸ್ಥಾಪನೆ
Feb 28 2024, 02:35 AM ISTನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮಂಗಳವಾರ ಹಳ್ಳಿ ಸಂಸ್ಕೃತಿಯ ವೈಭವ ಮನೆ ಮಾಡಿತ್ತು. ರಾಗಿ ಬೀಸುವ, ಭತ್ತಕುಟ್ಟುವ ಗ್ರಾಮೀಣ ಕುಟುಂಬದ ನಿತ್ಯದ ಚಟುವಟಿಕೆಗಳೊಂದಿಗೆ ಹಳ್ಳಿ ಸೊಗಡಿನ ವೇಷಭೂಷಣ ತೊಟ್ಟ ಮಹಿಳೆಯರು ಕೃಷಿ ಕೆಲಸ, ಹಳ್ಳಿ ಆಚರಣೆಗಳಲ್ಲಿ ಕಾಣುತ್ತಿದ್ದ ನೃತ್ಯ, ಗೀತಗಾಯನ ಪ್ರದರ್ಶಿಸಿ ಗಮನ ಸೆಳೆದರು.