ಮಾಧ್ಯಮದವರ ಮೇಲೆ ತುಮಕೂರು ಎಎಸ್ಪಿ ಖಾದರ್ ಹಲ್ಲೆ
Nov 02 2024, 01:39 AM ISTಕಾರ್ಯನಿರತ ಪತ್ರಕರ್ತರ ಮೇಲೆ ಗೂಂಡಾ ವರ್ತನೆ ತೋರಿಸಿ ಹಲ್ಲೆ ಮಾಡಿದ ತುಮಕೂರಿನ ಎಎಸ್ಪಿ ಅಬ್ದುಲ್ ಖಾದರ್ ಅವರನ್ನು ಹಾಸನಾಂಬೆ ಸೇವೆಯಿಂದ ರಿಲೀವ್ ಮಾಡಿದಲ್ಲದೇ, ಎಲ್ಲಾ ಪತ್ರಕರ್ತರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದ ಪ್ರಸಂಗ ಶುಕ್ರವಾರ ಮಧ್ಯಾಹ್ನ ನಡೆದಿದೆ. ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸೇರಿದಂತೆ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪತ್ರಕರ್ತರ ಜೊತೆ ಸಭೆ ನಡೆಸಿ ರಾಜಿ ಮಾಡಿದಲ್ಲದೇ ಹಲ್ಲೆ ಮಾಡಿದ ಪೊಲೀಸ್ ಅಬ್ದುಲ್ರಿಂದ ಕ್ಷಮೆ ಕೇಳಿಸಿ ಹಾಸನಾಂಬೆ ದೇವಾಲಯದ ಕರ್ತವ್ಯದಿಂದ ವಾಪಸ್ ಕಳುಹಿಸಲಾಯಿತು.