ಕೈ ನಡಿಗೆಯಲ್ಲಿ ಬಾಲರಾಮನ ದರ್ಶನ ಪಡೆದ ಭಕ್ತ
Jan 23 2024, 01:47 AM ISTಅಯೋಧ್ಯೆ ರಾಮಮಂದಿರ ಉದ್ಘಾಟನೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರು ಇನ್ನಿಲ್ಲದಂಥ ಹರಕೆಗಳನ್ನು ಹೊತ್ತು ಸಾಗುತ್ತಿದ್ದಾರೆ. ಸೋಮವಾರ ಸಾಗರದ ರಾಮನಗರ ಬಡಾವಣೆಯ ರಾಮಭಕ್ತ ಪ್ರಭು ಪಾದಗಳ ಬದಲಿಗೆ ಕೈಯಲ್ಲಿಯೇ (ತಲೆಕೆಳಗಾಗಿ) ನಡೆದು ರಾಮದೇವರ ದರ್ಶನ ಪಡೆಯುವ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.