ದಲಿತ-ಬುಡಕಟ್ಟು ಮಹಿಳೆಯರ ಆತ್ಮಕಥನಗಳು ಬಂದಿಲ್ಲ
Dec 23 2024, 01:03 AM ISTರಾಜ್ಯದಲ್ಲಿ ಈವರೆಗೆ ಪ್ರಕಟಗೊಂಡಿರುವ ಆತ್ಮಕಥನಗಳ ಸಂಖ್ಯೆ ೨೦೦ ಸಹ ದಾಟಿಲ್ಲ. ಈ ಪೈಕಿ ಅಲೆಮಾರಿ, ಬುಡಕಟ್ಟು ಸಮುದಾಯಗಳ ಆತ್ಮಕಥನಗಳು ಮಿತಿಯಲ್ಲಿವೆ. ದಲಿತ, ಬುಡಕಟ್ಟು ಲೋಕದ ಅದೆಷ್ಟೋ ಅನುಭವಗಳು ಆತ್ಮಕಥನಗಳಿಗೆ ಕನ್ನಡದ ದ್ವಾರದಲ್ಲಿ ಕಾದು ನಿಂತಿವೆ. ಆತ್ಮಕಥನದ ಮೂಲಕ ಹೊರಹೊಮ್ಮಬಹುದಾದ ಕಣ್ಣೋಟಗಳು ನಮ್ಮ ತಿಳಿವಳಿಕೆಗೆ ನಿಲುಕಿಲ್ಲ. ಕನ್ನಡದ ವಿವೇಕಕ್ಕೆ ದಕ್ಕಿಲ್ಲ.