• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದಿನಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

Sep 20 2024, 01:42 AM IST
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಕ್ರೀಡಾ ಇಲಾಖೆ ಶುಕ್ರವಾರದಿಂದ ಹಮ್ಮಿಕೊಂಡಿದೆ.

ಅ.4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ದಸರಾ : ಸಚಿವ ಎನ್.ಚಲುವರಾಯಸ್ವಾಮಿ

Sep 20 2024, 01:40 AM IST
ಅಕ್ಟೋಬರ್ 4 ರಿಂದ 7 ರವರೆಗೆ ಶ್ರೀರಂಗಪಟ್ಟಣದಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಮಾದರಿಯಲ್ಲಿ ವೈಭವದ ದಸರಾ ಆಚರಣೆಗೆ ಸಿದ್ಧತೆ

Sep 20 2024, 01:37 AM IST
ಕೋಟೆ ಪ್ರದೇಶದ ಯುವಕರು ಶ್ರದ್ಧೆ, ಭಕ್ತಿ ಹಾಗೂ ಅದ್ಧೂರಿಯಾಗಿ ದಸರಾ ಆಚರಿಸಲು ಮುಂದಾಗಿರುವುದು ಖುಷಿಯ ವಿಚಾರ. ಯುವಕರ ಪ್ರಯತ್ನವನ್ನು ಎಲ್ಲರೂ ಪ್ರೋತ್ಸಾಹಿಸಿ ಉತ್ಸವ ಯಶಸ್ವಿಯಾಗಲು ಸಹಕರಿಸಬೇಕು.

ನಾಳೆಯಿಂದ ದಸರಾ ಕ್ರೀಡಾಕೂಟ ಆರಂಭ

Sep 20 2024, 01:32 AM IST
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ವಿವಿಧ ಕ್ರೀಡಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೆ.21, 22 ರಂದು 2024-25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸೆ.21 ರಂದು ಬೆಳಿಗ್ಗೆ 9 ಗಂಟೆಗೆ ಹೊಸದುರ್ಗ ತಾಲೂಕು ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ, ಫುಟ್‍ಬಾಲ್, ಥ್ರೋಬಾಲ್, ಯೋಗ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಮಡಿಕೇರಿ ದಸರಾ: ಸಿದ್ಧತೆ ಪರಿಶೀಲಿಸಿದ ಶಾಸಕ ಮಂತರ್ ಗೌಡ

Sep 19 2024, 01:50 AM IST
ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಪೂರ್ವ ಸಿದ್ಧತೆ ಪರಿಶೀಲನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮುಂದಾಗಿದ್ದಾರೆ. ಬುಧವಾರ ದಸರಾ ಹಾಗೂ ದಶಮಂಟಪ ಸಮಿತಿಗಳೊಂದಿಗೆ ಪ್ರತಿ ದೇವಾಲಯಗಳಿಗೆ ಭೇಟಿ ನೀಡಿದ ಶಾಸಕ ಸಿದ್ಧತೆಗಳನ್ನು ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ದಸರಾ ಬಳಿಕ ಸಂಗೀತ ವಿವಿ ಘಟಿಕೋತ್ಸವ

Sep 18 2024, 01:53 AM IST
ಹಂಪಿ ವಿವಿಯಲ್ಲಿ ಕುಲಪತಿಯಾಗಿದ್ದ ಡಾ. ಕಂಬಾರರು ಸಂಸ್ಥಾಪನಾ ದಿನದಂದೇ ಘಟಿಕೋತ್ಸವವನ್ನೂ ನಡೆಸಿದ್ದರಂತೆ.

ಗೋಣಿಕೊಪ್ಪ: ಅ.11ರಂದು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ

Sep 18 2024, 01:47 AM IST
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಬಹುಭಾಷಾ ಕವಿಗೋಷ್ಠಿ ಅ.11ರಂದು ಬೆಳಗ್ಗೆ 10ಕ್ಕೆ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ನಡೆಯಲಿದೆ. ಆಸಕ್ತರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ಸೆ.28ರೊಳಗೆ ಕಳುಹಿಸಬೇಕು.

11 ದಿನಗಳ ಮಂಗಳೂರು ದಸರಾ, ಭರದ ಸಿದ್ಧತೆ

Sep 17 2024, 12:49 AM IST
ನಕ್ಷತ್ರ ಲೆಕ್ಕಾಚಾರದ ಪ್ರಕಾರ ಈ ಬಾರಿ 11 ದಿನಗಳ ಉತ್ಸವವಾಗಿದ್ದು, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸುವ ದೃಷ್ಟಿಯಿಂದ ಅಗತ್ಯ ಪೂರ್ವಸಿದ್ಧತೆ ನಡೆಯುತ್ತಿವೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ಹೇಳಿದ್ದಾರೆ.

ರೋಟರಿ ಮಿಸ್ಟಿ ಹಿಲ್ಸ್ ನಿಂದ ಅ.5 ರಂದು ಮಕ್ಕಳ ದಸರಾ

Sep 17 2024, 12:48 AM IST
ಕೊಡಗು ಜಿಲ್ಲೆಯ ಮಕ್ಕಳಿಗಾಗಿ ದಸರಾ ಸ್ಪರ್ಧೆಗಳು ಅ. 5ರಂದು ಶನಿವಾರ ಬೆಳಗ್ಗೆ 9.30 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಆರಂಭವಾಗಲಿದೆ. ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ದಸರಾ ಆಚರಣೆಗೆ ಅಗತ್ಯ ಸಿದ್ಧತೆ: ಸಚಿವ ಭೋಸರಾಜು ಸೂಚನೆ

Sep 16 2024, 01:50 AM IST
ವಿಜೃಂಭಣೆಯ ದಸರಾ ಆಚರಣೆಗೆ ಅಗತ್ಯ ಸಿದ್ಧತೆ ಆರಂಭಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದರು. ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದೇವೆ ಎಂದು ಹೇಳಿದರು.
  • < previous
  • 1
  • ...
  • 17
  • 18
  • 19
  • 20
  • 21
  • 22
  • 23
  • 24
  • 25
  • ...
  • 35
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved