• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿಜಯನಗರ ಕಾಲುವೆಗಳಿಗೆ ನೀರು, ರೈತರ ಪ್ರತಿಭಟನೆ ಅಂತ್ಯ

Nov 26 2023, 01:15 AM IST
ಹೊಸಪೇಟೆ ರೈತ ಸಂಘದ ನೇತೃತ್ವದಲ್ಲಿ ಆರಂಭಿಸಲಾಗಿದ್ದ ಮೂರು ದಿನಗಳ ಪ್ರತಿಭಟನಾ ಧರಣಿ ಶನಿವಾರ ಅಂತ್ಯವಾಗಿದೆ. ಪುರಾತನ ವಿಜಯನಗರ ಕಾಲುವೆಗಳಿಗೆ ವರ್ಷದ ೧೧ ತಿಂಗಳ ಕಾಲ ನೀರು ಹರಿಸಬೇಕು. ಈಗ ಜನವರಿ 16ರಿಂದ ಮೇ 31ರ ವರೆಗೆ ನೀರು ಹರಿಸಿ ಬೆಳೆಗಳನ್ನು ಉಳಿಸಬೇಕು ಎಂದು ಪ್ರತಿಭಟನೆ ಆರಂಭಿಸಿದ್ದರು.ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮನವರಿಕೆ ಮಾಡಿದ ಬಳಿಕ ಸ್ಥಗಿತಗೊಳಿಸಲಾಯಿತು.

ವಿಜಯನಗರ ಕಾಲುವೆಗೆ ೧೧ ತಿಂಗಳು ನೀರು ಹರಿಸಿ

Nov 24 2023, 01:30 AM IST
ತುಂಗಭದ್ರಾ ಅಣೆಕಟ್ಟು ನಿಮಾರ್ಣದ ಪೂರ್ವದಲ್ಲಿ ವಿಜಯನಗರ ಅರಸರ ಕಾಲದಿಂದಲೂ ರಾಯ, ಬಸವ, ತುರ್ತಾ, ಕಾಳಕಟ್ಟ ಕಾಲುವೆಗಳು ನಿರಂತರ ನೀರು ಒದಗಿಸುವ ಮೂಲಕ ಈ ಭಾಗದ ರೈತರು ಜನ- ಜಾನುವಾರುಗಳಿಗೆ ಆಶ್ರಯವಾಗಿದ್ದವು. ತುಂಗಭದ್ರಾ ಅಣೆಕಟ್ಟುಗಳು ನಿರ್ಮಾಣದ ನಂತರವೂ ವರ್ಷ ೧೧ ತಿಂಗಳು ನೀರು ಬಿಡುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿದ್ದು, ಈ ವರ್ಷ ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದ ಈ ಭಾಗದ ರೈತರು ಹಾಗೂ ಜನ ಜಾನುವಾರು ಸೇರಿದಂತೆ ರೈತರ ಬೆಳೆಗಳಿಗೂ ನೀರು ಸಿಗದೇ ತೊಂದರೆಯಾಗಿದೆ.

ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಆಗದಿರಲಿ

Nov 24 2023, 01:30 AM IST
ನರೇಗಾ ಅಡಿಯಲ್ಲಿ ತಾಪಂ ಇ.ಒ.ಗಳು ಕಾರ್ಮಿಕರಿಗೆ ಕೆಲಸಗಳನ್ನು ನೀಡಬೇಕು. ಸಾಗರ ಮತ್ತು ಸೊರಬದಲ್ಲಿ ಬೇಡಿಕೆ ಹೆಚ್ಚಿದೆ. ಗುರುತಿಸಿ ಕೆಲಸಗಳನ್ನು ನೀಡಬೇಕು. ಮಳೆ ಬಂದು ಬಿದ್ದಿರುವ, ಹಾನಿಗೊಳಗಾದ ಮನೆಗಳ ಜಿಪಿಎಸ್ ಬಾಕಿ ಇರುವುದನ್ನು ಪಿಡಿಒಗಳು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಎಲ್ಲ ತಹಸೀಲ್ದಾರ್, ಇ.ಒ.ಗಳು, ಪಿ.ಡಿ.ಒ.ಗಳ ಜೊತೆಗೂಡಿ ಪ್ರತಿ 15 ದಿನಗಳಿಗೆ ಒಮ್ಮೆ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಜಾನುವಾರು ಮೇವಿಗೆ ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕಾಳು ಕಟ್ಟುತ್ತಿರುವ ಭತ್ತದ ಬೆಳೆಗಳಿಗೆ ನೀರು ಹರಿಸಿ

Nov 23 2023, 01:45 AM IST
ನವೆಂಬರ್ ತಿಂಗಳಾಂತ್ಯದವರೆಗೂ ಭದ್ರಾ ನೀರು ನೀಡಿ । ಬಿಜೆಪಿ ರೈತ ಮೋರ್ಚಾದಿಂದ ಸರ್ಕಾರಕ್ಕೆ ಮನವಿ

24/7 ನಿರಂತರ ನೀರು ಯೋಜನೆ ನಿರ್ಲಕ್ಷ್ಯ ಸಲ್ಲದು

Nov 18 2023, 01:00 AM IST
ಮಹಾನಗರದಲ್ಲಿ ನಡೆಯುತ್ತಿರುವ 24x7 ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಬೇಕು. ಹೆಚ್ಚಿನ ತಂಡಗಳನ್ನು ನಿಯೋಜಿಸಿ ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಾಕೀತು ಮಾಡಿದರು.

ಚಿಕ್ಲಿಹೊಳೆ ಜಲಾಶಯದ ನೀರು ಬಹುತೇಕ ಖಾಲಿ!

Nov 18 2023, 01:00 AM IST
ಸುಂಟಿಕೊಪ್ಪ ಸಮೀಪದ ಚಿಕ್ಲಿಹೊಳೆ ಜಲಾಶಯವು 0.18 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಮಳೆ ಇಲ್ಲದ ಪರಿಣಾಮ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ನಿರಂತರವಾಗಿ ನೀರು ಹರಿಸಿದ ಪರಿಣಾಮ ಪ್ರಸ್ತುತ ಜಲಾಶಯದಲ್ಲಿ 0.035ರಷ್ಟು ಮಾತ್ರ ನೀರಿದೆ. ಅಂದರೆ ಅರ್ಧಕ್ಕಿಂತಲೂ ಕಡಿಮೆ ನೀರಿದ್ದು, ಆತಂಕಕ್ಕೆ ಕಾರಣವಾಗಿದೆ.

ಜನತೆಯ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ಬೆಲೆ

Nov 17 2023, 06:45 PM IST
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ, ಇದೀಗ ಹಬ್ಬ ಕಳೆದರೂ ಇಳಿಮುಖವಾಗದೇ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ 50 ರಿಂದ 65 ರು. ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರು.ವರೆಗೂ ಮಾರಾಟವಾಗುತ್ತಿದೆ.

ಮೇ ೩೧ರ ವರೆಗೆ ವಿಜಯನಗರ ಕಾಲುವೆಗೆ ನೀರು ಹರಿಸಿ

Nov 16 2023, 01:16 AM IST
೧೧ ತಿಂಗಳು ಕಾಲ ನೀರು ಪಡೆಯುವ ಮೂಲಭೂತ ಹಕ್ಕು ವಿಜಯನಗರ ಕಾಲುವೆಗಳ ಭಾಗದ ರೈತರದ್ದಾಗಿದೆ. ಮೇ ೩೧ರ ವರೆಗೆ ನೀರು ಹರಿಸಲು ಕ್ರಮ ವಹಿಸಬೇಕು. ಈ ವಿಚಾರವಾಗಿ ತಾತ್ಸಾರ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್ ಮತ್ತು ಹೆದ್ದಾರಿ ಬಂದ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ನವೆಂಬರ್‌ ಅಂತ್ಯದ ವರೆಗೆ ಕಾಲುವೆಗೆ ನೀರು ಹರಿಸಿ

Nov 14 2023, 01:16 AM IST
ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಎಚ್ಎಲ್‌ ಕಾಲುವೆಗೆ ನವೆಂಬರ್ ತಿಂಗಳು ಪೂರ್ತಿ ನೀರು ಹರಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

ಕಾವೇರಿ: ಆಲ್ಕಿಯಲ್ಲಿ ನೀರು ಹಾಕಿ ವಿನೂತನ ಪ್ರತಿಭಟನೆ

Nov 14 2023, 01:15 AM IST
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಳೆದ 64 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು ಸೋಮವಾರ ಆಲ್ಕಿಯಲ್ಲಿ ನೀರು ಹಾಕಿ ವಿನೂತನ ಪ್ರತಿಭಟನೆ ನಡೆಸಲಾಯಿತು.
  • < previous
  • 1
  • ...
  • 160
  • 161
  • 162
  • 163
  • 164
  • 165
  • 166
  • 167
  • 168
  • 169
  • 170
  • next >

More Trending News

Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್‌ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್‌ ಸಂಪರ್ಕ ಕಡಿತ
ಕಾಂಗ್ರೆಸ್‌ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್‌ : ನಿಖಿಲ್‌
ಒಂದೇ ತಿಂಗಳಲ್ಲಿ 70+ ಎಸ್‌ಐ, ಇನ್ಸ್‌ಪೆಕ್ಟರ್‌ಗಳಿಗೆ ಮುಂಬಡ್ತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved