ರಾಷ್ಟ್ರೀಯ ಲೋಕ್ ಅದಾಲತ್: ೯೮೬ ಪ್ರಕರಣ ಇತ್ಯರ್ಥ
Jul 13 2025, 01:18 AM ISTಪುತ್ತೂರು ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ೬ ನ್ಯಾಯಾಲಯಗಳಿಗೆ ಸಂಬಂಧಿಸಿದ ಒಟ್ಟು ೬೯೬೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಅದಾಲತ್‌ನಲ್ಲಿ ೧೫೧೨ ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಪ್ರಯತ್ನಿಸಲಾಗಿತ್ತು. ೯೮೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಒಟ್ಟು ಫಲಾನುಭವಿಗಳಿಗೆ ೨,೧೩,೦೫,೦೯೭ ರು. ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಯಿತು.