ಯುವಕನ ಮೇಲೆ ಹಲ್ಲೆ ಪ್ರಕರಣ: ಆರು ಆರೋಪಿಗಳ ಬಂಧನ
Jul 01 2025, 12:47 AM ISTಹಲ್ಲೆಗೊಳಗಾದ ವಿನಾಯಕ ಭಂಡಾರಿ ಯುವತಿ ಜತೆಗೆ ಈ ಹಿಂದೆ ಒಡನಾಟ ಹೊಂದಿದ್ದನು. ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ದೂರಾಗಿದ್ದರು. ಅದೇ ಯುವತಿಯನ್ನು ಪೃಥ್ವಿರಾಜ ಬೇತಾಪಲ್ಲಿ ಪ್ರೀತಿಸುತ್ತಿದ್ದನು. ಅಲ್ಲದೇ, ಯುವತಿ ವಿನಾಯಕ ಭಂಡಾರಿ ಪತ್ನಿ ಸಹೋದರಿಯಾಗಿದ್ದು, ಇವರ ಪ್ರೀತಿ ವಿಚಾರಕ್ಕೆ ಅಡ್ಡಿ ಉಂಟು ಮಾಡಿದ್ದನು. ಇದೇ ಹಿನ್ನೆಲೆಯಲ್ಲಿ ಪೃಥ್ವಿರಾಜ ಬೇತಾಪಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.