ನಾಳೆ ರಕ್ಷಿದಿಯಲ್ಲಿ ಕರೀಂಖಾನ್ ಪ್ರಶಸ್ತಿ ಪ್ರದಾನ
Mar 07 2025, 12:45 AM ISTಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರತಿಭಾನ್ವಿತರಿಗೆ ಪ್ರತಿವರ್ಷ ನೀಡಲಾಗುವ ಎಸ್.ಕೆ ಕರೀಂಖಾನ್ ಪ್ರಶಸ್ತಿ ೧೦ ಸಾವಿರ ನಗದು ಒಳಗೊಂಡಿರಲಿದೆ. ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಅಮೃತ ಕಲಾ ಪ್ರಶಸ್ತಿ ಐದು ಸಾವಿರ ನಗದು ಒಳಗೊಂಡಿರಲಿದೆ. ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶನದಂತೆ ಈ ಬಾರಿ ಎಸ್.ಕೆ ಕರೀಂಖಾನ್ ಪ್ರಶಸ್ತಿ ಜನಪರ ನಿಲವಿನೊಂದಿಗೆ ರಂಗಕಾಯಕ ನಡೆಸುತ್ತಿರುವ ಹರಪನಹಳ್ಳಿ ತಾಲೂಕಿನ ಬಿ.ಪರಶುರಾಮ್ ಅವರಿಗೆ ನೀಡಲಾಗುತ್ತಿದೆ.