ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ನಿರ್ಮಾಣಕ್ಕೆ ಆದ್ಯತೆ ಅಗತ್ಯ
Mar 01 2025, 01:05 AM ISTತರೀಕೆರೆ, ಜಿಲ್ಲೆಯಲ್ಲೇ ಒಂದು ದೊಡ್ಡ ಕಂದಾಯ ಉಪವಿಭಾಗವಾಗಿರುವ ಅವಿಭಜಿತ ತರೀಕೆರೆ ವ್ಯಾಪಾರ ವಹಿವಾಟು, ಜನ, ವಾಹನ ಸಂಚಾರ, ಸರಕು ಸಾಗಾಣಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣವೂ ಆಗಿರುವ ತಾಲೂಕಿನಲ್ಲಿ ಮೂಲಭೂತ ಅವಶ್ಯಕತೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದರೂ ಅಗತ್ಯವಿರುವ ಬಸ್ ಸಂಚಾರ ವ್ಯವಸ್ಥೆ ಮಾತ್ರ ಸುಸೂತ್ರವಾಗಿಲ್ಲ. ಈ ನಿಟ್ಟಿನಲ್ಲಿ ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂಬುದು ಜನರ ಆಶಯವಾಗಿದೆ.