ತೆರಿಗೆ ಏರಿಸಿ ವೈಸರಾಯ್ನಂತೆ ಸಿಎಂ ವರ್ತನೆ: ಬಿಜೆಪಿ
Apr 02 2025, 01:00 AM ISTಕರುಣೆ, ಕನಿಕರವೇ ಇಲ್ಲದೇ ತೆರಿಗೆ ವಿಧಿಸುತ್ತ, ಬೆಲೆ ಏರಿಕೆ ಮಾಡುತ್ತ ಸಿಎಂ ಸಿದ್ದರಾಮಯ್ಯ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್ನಂತೆ ವರ್ತಿಸುತ್ತಿದ್ದಾರೆ. ಉಪ್ಪಿನಿಂದ ಗಾಳಿವರೆಗೆ ಎಲ್ಲದರ ಮೇಲೂ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿದ್ದಾರೆ. ಜನರ ಬದುಕಿಗೆ ಬರೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಆರೋಪಿಸಿದ್ದಾರೆ.