ಮನೆ ಕಳ್ಳತನ ಮಾಡಿದ್ದ ಕಳ್ಳನ ಬಂಧನ: ಬೈಕ್, ಚಿನ್ನಾಭರಣ ವಶ
Jan 10 2025, 12:46 AM ISTಸಿಂದಗಿ: ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳ ಕಳ್ಳತನ ನಡೆಸಿದ್ದ ಕಳ್ಳನನ್ನು ಬಂಧಿಸುವಲ್ಲಿ ಸಿಂದಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ರಾಜನಕೂಳೂರು ಗ್ರಾಮದ ನಿಂಗಪ್ಪ ರಾಜಪ್ಪ ಬಡಿಗೇರ ಬಂಧಿತ ಕಳ್ಳನಾಗಿದ್ದು, ಈತ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಸೇರಿದಂತೆ ತಾಲೂಕಿನ ಕೊಕಟನೂರು, ಸುಂಗಠಾಣ ಗ್ರಾಮಗಳಲ್ಲಿ ಮನೆಗಳ ಕಳ್ಳತನ ನಡೆಸಿದ್ದನು. ಅಲ್ಲದೇ, ವಿಚಾರಣೆ ವೇಳೆ ಕಳ್ಳತನ ಮಾಡಿದ್ದಾಗಿ ಆತನೇ ಒಪ್ಪಿಕೊಂಡಿದ್ದಾನೆ.