ಪುಂಡರ ಬೈಕ್ ಕರ್ಕಶ ಶಬ್ದಕ್ಕೆ ಬೆಚ್ಚಿದ ಜನತೆ!
Jun 20 2024, 01:07 AM ISTಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರದ್ದೇ ಕಿರಿಕಿರಿ. ಇವರಿಗೆ ವೇಗದ ಮಿತಿ ಇಲ್ಲ, ಅದರಲ್ಲಿಯೂ ಪುಂಡರು ಅಪಾಯಕಾರಿ ಸದ್ದು ಮಾಡುತ್ತ ಬರುವ ಬೈಕ್ಗಳ ಹಾವಳಿ ಪಟ್ಟಣದಲ್ಲಿ ಹೆಚ್ಚಾಗಿದೆ. ಯುವಕರ ಈ ಹುಚ್ಚಾಟಕ್ಕೆ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.