ಲಾರಿ ಡಿಕ್ಕಿಯಾಗಿ ಬೈಕ್ ಸವಾರರ ಸಾವು
Oct 05 2024, 01:34 AM ISTಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಸರಕು ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಮನಗೂಳಿ ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಮುಳವಾಡ ಕ್ರಾಸ್‌ನಲ್ಲಿ ಶುಕ್ರವಾರ ಸಂಭವಿಸಿದೆ. ಮನಗೂಳಿ ಪಟ್ಟಣದ ಭೀಮಶಿ ಯಲಗೂರಪ್ಪ ಹಿಟ್ನಳ್ಳಿ(48) ಮತ್ತು ಖಂಡೋಬಾ ಮಾರ್ತಂಡ ಘೋರ್ಪಡೆ(55) ಇಬ್ಬರು ಮೃತ ದುರ್ದೈವಿಗಳು. ಇವರು ಆಲಮಟ್ಟಿಯಿಂದ ವಿಜಯಪುರ ಕಡೆಗೆ ಹೊರಟ್ಟಿದ್ದ ಲಾರಿಯೊಂದು ರಸ್ತೆ ದಾಟುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.