ಶತಮಾನ ಪೂರೈಸಿದ ಶಾಲೆಗೆ ವಿಶೇಷ ಕಾರ್ಯಕ್ರಮ ರೂಪಿಸಿ: ಬಸವರಾಜ ಬೊಮ್ಮಾಯಿ
Mar 16 2025, 01:52 AM ISTಶಿಕ್ಷಣ ಸಂಸ್ಥೆಗೆ ನೂರು ವರ್ಷವಾಗುವುದು ಇತಿಹಾಸ ನಿರ್ಮಾಣ ಮಾಡಿದಂತೆ. ಇದರ ಹಿಂದೆ ನೂರಾರು ಕಥೆಗಳಿರುತ್ತವೆ. ಶಿಕ್ಷಕರು ಸರ್ಕಾರಿ ನೌಕರಿಗೆ ಬಂದಿದ್ದೇನೆ ಎಂದು ಭಾವಿಸಬಾರದು, ವೈದ್ಯ ಹೇಗಿದ್ದಾರೆ ಎಂದು ತಿಳಿಯಲು ಒಂದು ವಾರ ಸಾಕು, ಶಿಕ್ಷಕರು ಹೇಗಿದ್ದಾರೆ ಎಂದು ತಿಳಿಯಲು ಕನಿಷ್ಠ 25 ವರ್ಷ ಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.