ಬೆಲೆ ಕುಸಿತದಿಂದ ಭತ್ತ ಬೆಳೆಯಲು ರೈತರ ನಿರಾಸಕ್ತಿ
Feb 09 2025, 01:15 AM ISTಧಾರಣೆ ಕುಸಿತ ಸಕಲೇಶಪುರ ತಾಲೂಕಿನಲ್ಲಿ ಮತ್ತಷ್ಟು ರೈತರು ಭತ್ತ ಬೆಳೆಯುವುದರಿಂದ ವಿಮುಖವಾಗುವಂತೆ ಮಾಡಿದೆ. ತಾಲೂಕಿನಲ್ಲಿ ೧೧ ಸಾವಿರ ಹೇಕ್ಟೆರ್ ಭತ್ತದ ಗದ್ದೆಗಳಿದ್ದರೂ ಪ್ರಸಕ್ತವರ್ಷ ಕೇವಲ ೭೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದ್ದು, ಹತ್ತಾರು ಎಕರೆ ಭತ್ತದ ಗದ್ದೆಗಳಿದ್ದರೂ ಅಂಗಡಿಯಿಂದ ಕೊಂಡು ತಂದು ತಿನ್ನುವ ಸ್ಥಿತಿ ತಾಲೂಕಿನ ರೈತರದ್ದಾಗಿದೆ. ಆದರೂ, ಈ ಮಧ್ಯೆ ಕೆಲವು ರೈತರು ಹಲವು ಸಮಸ್ಯೆಗಳ ನಡುವೆ ಭತ್ತ ಬೆಳೆಯುತ್ತಿದ್ದಾರೆ. ಆದರೆ ಪ್ರಸಕ್ತವರ್ಷ ಭತ್ತಕ್ಕಿರುವ ಧಾರಣೆ ಇವರನ್ನೂ ಸಹ ಬೆಳೆ ಬೆಳೆಯುವುದರಿಂದ ವಿಮುಖವಾಗುವಂತೆ ಮಾಡಿದೆ.