ಮಳೆ ಕೊರತೆಯಿಂದ ಭತ್ತ ಬೆಳೆಗೆ ಹಿನ್ನೆಡೆ
Feb 24 2024, 02:30 AM IST ಮುಂಗಾರು ಮತ್ತು ಹಿಂಗಾರು ಮಳೆ ಕ್ಷೀಣವಾದ ಪರಿಣಾಮ ನೀರಿನ ಕೊರತೆಯಿಂದ ತಾಲೂಕಿನ ರೈತರು ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ಈ ಕಾರಣದಿಂದ ತಾಲೂಕಿನಲ್ಲಿ ಭತ್ತದ ಬೆಳೆಗೆ ಹಿನ್ನೆಡೆಯಾಗಿದೆ. ಅಲ್ಪಸ್ವಲ್ಪ ಸುರಿದ ಮಳೆಯಿಂದ ಭತ್ತ ಬೆಳೆದ ದೊಡ್ಡ ಹಿಡುವಳಿದಾರರು ಕೊಳವೆಬಾವಿ ಮೂಲಕ ನೀರು ಹಾಯಿಸಿಕೊಂಡು, ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ, ಭತ್ತಕ್ಕೆ ಪರ್ಯಾಯವಾಗಿ ಬೆಳೆದ ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳೂ ಸಹ ನೀರಿಲ್ಲದೇ ಸೊರಗುತ್ತಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಕುಮಾರ್ ಸೊರಬದಲ್ಲಿ ಹೇಳಿದ್ದಾರೆ.