ಬೆಂಬಲ ಬೆಲೆ ಯೋಜನೆಯಡಿ ಜ.1ರಿಂದ ರೈತರಿಂದ ಭತ್ತ, ರಾಗಿ ಬಿಳಿಜೋಳ ಖರೀದಿ: ಕೆ.ಎಚ್.ಮುನಿಯಪ್ಪ
Dec 18 2024, 12:47 AM ISTಕರ್ನಾಟಕದಲ್ಲಿ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲು ಕೇಂದ್ರ ಸರ್ಕಾರವು ದರ ನಿಗದಿಪಡಿಸಿದೆ. ಖರೀದಿಸುವ ಪ್ರತಿ ಕ್ವಿಂಟಲ್ ಭತ್ತ (ಸಾಮಾನ್ಯ)ಕ್ಕೆ 2,300 ರು. ; ಭತ್ತ (ಗ್ರೇಡ್-ಎ) 2,320 ರು.; ರಾಗಿ 4,290 ರು, ಜೋಳ (ಹೈಬ್ರಿಡ್) 3,371 ರು ಹಾಗೂ ಜೋಳ (ಮಾಲ್ದಂಡಿ) 3,421 ರು. ದರ ನಿಗದಿಪಡಿಸಲಾಗಿದೆ.