ಓವರ್ ಟ್ಯಾಂಕ್ ನಿರ್ಮಿಸಲು ನಗರಸಭೆ ಅಧ್ಯಕ್ಷರಿಂದ ಭೂಮಿ ಪೂಜೆ
Nov 07 2024, 11:57 PM ISTವಿಜಯನಗರ ಬಡಾವಣೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ೪,೭೫,೦೦೦ ಲೀಟರ್ ಸಾಮರ್ಥ್ಯದ ಸಂಗ್ರಹದ ಓವರ್ ರೆಡ್ಟ್ಯಾಂಕನ್ನು ನಿರ್ಮಿಸಲು ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಇನ್ನು ಒಂದು ವರ್ಷದೊಳಗೆ ನದೀ ನೀರನ್ನು ಈ ಬಡಾವಣೆಗೆ ನೀಡಲಾಗುವುದು ಎಂದರಲ್ಲದೆ ಈ ಯೋಜನೆ ಅನುಷ್ಠಾನ ಮಾಡುವ ಕಂಪನಿಯವರು ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕೆಂದು ಸೂಚಿಸಿದರು.