ಜನಸೇವೆಯಲ್ಲಿಯೇ ಕೈಲಾಸ ಕಂಡವರು ಸ್ಕೌಟ್ಸ್‌ ಅಂಡ್ ಗೈಡ್ಸ್ ಮಕ್ಕಳು

Mar 27 2025, 01:02 AM IST
ನಮ್ಮ ಭಾರತ್ ಸ್ಕೌಟ್ಸ್‌ ಅಂಡ್ ಗೈಡ್ಸ್ ಮಕ್ಕಳು ಚಳಿ, ಬಿಸಿಲು ಹಾಗೂ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಾಸನಾಂಬೆ ಜಾತ್ರಾ ಮಹೋತ್ಸವ ಹಾಗೂ ಶ್ರವಣಬೆಳಗೊಳದ ಜಾತ್ರೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡು ಜನರ ಸೇವೆಯಲ್ಲಿಯೇ ದೇವರನ್ನು ಕಂಡಿದ್ದಾರೆ ಎಂದು ಸ್ಕೌಟ್ಸ್‌ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಶ್ಲಾಘಿಸಿದರು. ನಮ್ಮ ಜಿಲ್ಲೆಯಲ್ಲಿ ವಿವಿಧ ಐತಿಹಾಸಿಕ ಸ್ಥಳಗಳಿವೆ. ಈ ಜಾಗಗಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಮಕ್ಕಳು ವೀಕ್ಷಣೆ ಮತ್ತು ಪರಿಚಯ ಮಾಡಿಕೊಳ್ಳುವ ಶಿಬಿರವನ್ನು ಮಾರ್ಚ್ ೨೨ರಿಂದ ಮಾರ್ಚ್ ೨೪ರವರೆಗೂ ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.