ಕೈಕೊಟ್ಟ ಮಳೆ, ತಗ್ಗಿದ ಅಂತರ್ಜಲ: ಕೊಡಗಿನ ಬೆಳೆಗಾರರು ಕಂಗಾಲು
May 02 2024, 12:16 AM ISTಕೊಡಗಿನಲ್ಲಿ ಬೇಸಿಗೆಯ ನಡುವೆ ಬರಬೇಕಾಗಿದ್ದ ಮಳೆ ದೂರವಾಗುತ್ತಿದ್ದಂತೆ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ತೋಟಗಳನ್ನು, ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಕೊಳವೆಬಾವಿಗಳಿಗೆ ಮೊರೆ ಹೋಗಿದ್ದು, ಅಲ್ಲೂ ಕೂಡ ಅಂತರ್ಜಲ ಕಡಿಮೆಯಾಗುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿದೆ.