ಜಗಳೂರು ತಾಲೂಕಿನಲ್ಲಿ ಭಾರಿ ಮಳೆ: ಬಾಳೆಗೆ ಹಾನಿ
Apr 24 2024, 02:16 AM ISTಜಗಳೂರು ತಾಲೂಕಿನಲ್ಲಿ ಸೋಮವಾರ ರಾತ್ರಿ ವಿವಿಧೆಡೆ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ಫಸಲಿಗೆ ಬಂದಿರುವ ಬಾಳೆ ಬೆಳೆ ಧರೆಗುರುಳಿವೆ. ತೋರಣಗಟ್ಟೆ, ಜಮ್ಮಾಪುರ, ಕಲ್ಲೇದೇವರಪುರ, ಆಕನೂರು, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ನಿಬಗೂರು, ಬಿದರಕೆರೆ, ಲಿಂಗಣ್ಣನಹಳ್ಳಿ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇದರಿಂದಾಗಿ ಬಾಳೆ ಗಿಡಗಳು ಗೊನೆಸಹಿತ ನೆಲಕ್ಕೆ ಮುರಿದುಬಿದ್ದಿವೆ. ಲಕ್ಷಾಂತರ ರು. ಬೆಳೆ ನಷ್ಟ ಸಂಭವಿಸಿದೆ.