ಮಕ್ಕಳ ಮಾನಸಿಕ ಖಿನ್ನತೆಗೆ ಮೊಬೈಲ್, ಡ್ರಗ್ಸ್ ಕಾರಣ: ಡಾ.ದೇವದಾಸ ರೈ
Feb 20 2024, 01:49 AM ISTಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣದ ನಿರೀಕ್ಷೆಯಲ್ಲಿ ಗುಣಮಟ್ಟದ ಶಾಲೆಗೆ ಸೇರಿಸಿದ್ದರೂ ಮಕ್ಕಳಿಗೆ ಮೊಬೈಲ್ ಫೋನ್ ನೀಡಿ ತಮ್ಮ ಪಾಡಿಗೆ ಇದ್ದು ಬಿಡುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೊಬೈಲ್ ಸಹವಾಸದಿಂದ ಮಕ್ಕಳು ಹಾಳಾಗುತ್ತಿರುವುದು ಕಳವಳಕಾರಿ ಎಂದು ಖ್ಯಾತ ವೈದ್ಯ ಪ್ರೊ. ಬಿ. ದೇವದಾಸ್ ರೈ ಹೇಳಿದ್ದಾರೆ. ಮಂಗಳೂರಿನ ಕೂಳೂರು ಶ್ರೀ ಅಮೃತ ನರ್ಸರಿ ಸ್ಕೂಲ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.