ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪ್ರವಾಸ ಮುಗಿಸಿ ಬಂದ ಬಳಿಕ ಭಾರತದ ವಿರುದ್ಧ ಹರಿಹಾಯ್ದಿದ್ದು, ನಾವು ನಮ್ಮನ್ನು ಬೆದರಿಸುವಂತೆ ಯಾರಿಗೂ ಲೈಸನ್ಸ್ ನೀಡಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ನಡುವೆ ಪ್ರವಾಸೋದ್ಯಮ ವಿಚಾರವಾಗಿ ಸೃಷ್ಟಿಯಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ಭಾರತೀಯರಿಂದ ಶುರುವಾಗಿರುವ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಅಲ್ಲಿನ ವಿಪಕ್ಷಗಳು ಹಾಗೂ ಉದ್ಯಮ ಕಂಗಾಲಾಗಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಯಾಗಿ ಮಾಲ್ಡೀವ್ಸ್ ಭಾರಿ ನಷ್ಟ ಅನುಭವಿಸುತ್ತಿದೆ. ಭಾರತೀಯರ ಬಾಯ್ಕಾಟ್ ಅಭಿಯಾನಕ್ಕೆ ಅಕ್ಷರಶಃ ನಲುಗಿದೆ. ನಾವು ಕ್ಷಮೆ ಕೇಳುತ್ತೇವೆ ಮಾಲ್ಡೀವ್ಸ್ಗೆ ಮರಳಿ ಎಂದು ಅಲ್ಲಿನ ಜನಪ್ರತಿನಿಧಿಗಳು ದುಂಬಾಲು ಬಿದ್ದಿದ್ದಾರೆ.