ವಿಶೇಷಚೇತನ ವಿದ್ಯಾರ್ಥಿಗಳ ಸಲಕರಣೆಗಾಗಿ 21 ಲಕ್ಷ ಮೀಸಲು
Dec 09 2023, 01:15 AM ISTಸಾಮಾಜಿಕ ಕಳಕಳಿಯ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನ ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಕಾರ್ಖಾನೆ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಾಲೂಕಿನ ಮೈದೊಳಲು ಮತ್ತು ಮಂಗೋಟೆ ಗ್ರಾಮಗಳಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ, ಯೂನಿಟಿ ಆಸ್ಪತ್ರೆ, ತಾಲೂಕು ಆರೋಗ್ಯ ಕೇಂದ್ರ ಮತ್ತು ವಿಐಎಸ್ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಸಾಮಾನ್ಯ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣೆ, ಸ್ತ್ರೀರೋಗ, ಮಕ್ಕಳ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು ೬೦೦ ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.