ರಾಜ್ಯದಲ್ಲಿ ಹೊರಗುತ್ತಿಗೆಗೂ ಮೀಸಲು
May 21 2024, 12:36 AM ISTಸರ್ಕಾರದ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿ ವೇಳೆ ಮೀಸಲಾತಿಗೆ 2023ರ ಡಿ.12ರಂದು ಸಂಪುಟ ಸಭೆ ನಿರ್ಧಾರ ಮಾಡಿದೆ. ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿಯಲ್ಲಿ ಮೀಸಲಿಗೆ ಅನುಮೋದನೆ ನೀಡಿದ್ದ ಸರ್ಕಾರ, ಇದೀಗ ಎಲ್ಲ ಇಲಾಖೆ, ಸ್ವಾಯತ್ತ ಸಂಸ್ಥೆ, ನಿಗಮ-ಮಂಡಳಿಯಲ್ಲಿ ಕಡ್ಡಾಯ ಪಾಲನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸುತ್ತೋಲೆ ಜಾರಿ ಮಾಡಿದೆ.