ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತ ಇರುವವರೆಗೂ ಒಬಿಸಿ, ಎಸ್‌ಸಿ, ಎಸ್ಟಿ ಮೀಸಲು ಕಸಿದು ಅದನ್ನು ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲು ಬಿಡಲ್ಲ ಎಂದು ಗುಡುಗಿದ್ದಾರೆ.
ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ. ಎಸ್ಸಿ, ಎಸ್ಟಿಗಳ ಅನುದಾನ ಮುಸ್ಲಿಮರಿಗೆ ನೀಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಇಂಡಿಯಾ ಮೈತ್ರಿಕೂಟವನ್ನು ಸತತ 5ನೇ ದಿನವೂ ಗುರಿಯಾಗಿಸಿಕೊಂಡಿರುವ ಪ್ರಧಾನಿ ‘ಕಾಂಗ್ರೆಸ್ ಸಂವಿಧಾನ ಬದಲಾಯಿಸಲು ಬಯಸಿದೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ದಲಿತರು, ಒಬಿಸಿಗಳ ಮೀಸಲನ್ನು ಧರ್ಮ ಆಧರಿತ ಮೀಸಲಿಗಾಗಿ ದೋಚಲು ಬಯಸಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.