ಮೀಸಲು ಸೌಲಭ್ಯ ಪಡೆದವನಿಗೆ ಐಷರಾಮಿ ಬದುಕು ಸಲ್ಲ
Jun 24 2024, 01:31 AM ISTಮೀಸಲಾತಿಯಿಂದ ವಿದ್ಯೆ, ಉದ್ಯೋಗ, ಅಂತಸ್ತು, ಪಡೆದವರು ಐಷರಾಮಿ ಬದುಕು ಸಾಗಿಸುವುದು ಸಲ್ಲವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರ ಕೇಂದ್ರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಪೇ ಬ್ಯಾಕ್ ಟು ಸೊಸೈಟಿ - ಶೋಷಿತ ವರ್ಗದ ನೌಕರರ ಜವಾಬ್ದಾರಿ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.