ಕೂಸ್ಗಲ್ ಮೀಸಲು ಅರಣ್ಯ ನೆಡುತೋಪಿನಲ್ಲಿ ಸಾಗುವಾನಿ ಮರ ಕಡಿದ ಆರೋಪಿಗಳ ಬಂಧನ
Oct 27 2024, 02:24 AM ISTನರಸಿಂಹರಾಜಪುರ, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಅಳೇಹಳ್ಳಿ ಗ್ರಾಮದ 8 ನೇ ಮೈಲಿಕಲ್ ಸಮೀಪದ ಕೂಸ್ಗಲ್ ಮೀಸಲು ಅರಣ್ಯದ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸಲು ಪ್ರಯತ್ನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.