ಯಡಿಯೂರಪ್ಪ ಹಾಗೂ ಕುಟುಂಬದವರು ಹಾಸನಾಂಬೆ ದೇವಿ ದರ್ಶನ ಪಡೆದರು. ಇದೇ ವೇಳೆ ಮಾತನಾಡಿ, ಪ್ರತಿನಿತ್ಯ ಇಲ್ಲಿಗೆ ಬಂದು ಹಾಸನಾಂಬೆ ದರ್ಶನ ಮಾಡುತ್ತಿದ್ದು, ವರ್ಷಪೂರ್ತಿ ಅದೇ ದೀಪ ಉರಿದು ತಾಯಿ ವರ್ಷಕ್ಕೆ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ಮಾಡಲಾಗುತ್ತಿದೆ ಎಂದರು.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಹಾಗೂ ಅವರ ಸೋದರಿ, ಕಾಂಗ್ರೆಸ್ ನಾಯಕಿ ವೈ.ಎಸ್. ಶರ್ಮಿಳಾ ವಿರುದ್ಧ ವಾಗ್ಯುದ್ಧ ಮುಂದುವರಿದಿದೆ. ತಮ್ಮ ವಿರುದ್ಧವೇ ಆಸ್ತಿ ಕಬಳಿಕೆ ಕೇಸು ದಾಖಲಿಸಿದ ಜಗನ್ ಅವರು, ‘ಇದು ಘರ್ ಘರ್ ಕಿ ಕಹಾನಿ’ ಎಂದಿರುವುದಕ್ಕೆ ಸೋದರಿ ಶರ್ಮಿಳಾ ಕಿಡಿಕಾರಿದ್ದಾರೆ.
ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ ₹10 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯ ತೆರವುಗೊಳಿಸುವಂತೆ ನಿರ್ದೇಶಿಸಿದ್ದಾರೆ.