ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವುದು ದಾಖಲಿಸಿದ ಬೆನ್ನಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ದೇಶಕ್ಕೆ ಗಂಭೀರ ರಾಜಕೀಯ ಪರಿವರ್ತನೆ, ವಿಕಸಿತ ಭಾರತದ ಅಗತ್ಯವಿದೆಯೇ ಹೊರತು ಧೂರ್ತರು, ಮೂರ್ಖರ ರಾಜಕಾರಣ ಅಲ್ಲ’ ಎಂದಿದ್ದಾರೆ.
ಸಂವಿಧಾನ ರದ್ದುಪಡಿಸಲು ಬಿಜೆಪಿ ಯತ್ನಿಸುತ್ತಿದೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ನಾಯಕರ ಇತ್ತೀಚಿನ ಸರಣಿ ಟೀಕೆಗೆ ಗುರುವಾರ ಎಳೆಎಳೆಯಾಗಿ ತಿರುಗೇಟು ನೀಡಿದ್ದಾರೆ ಪ್ರಧಾನಿ ಮೋದಿ