ಪುಲ್ವಾಮಾ ದಾಳಿಯಾಗದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ: ಬಾಲಕೃಷ್ಣ್ಣ

Nov 28 2023, 12:30 AM IST
ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಸಂವಿಧಾನ ದಿನದ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಅಮಾಯಕ ಸೈನಿಕರ ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕಿದೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರನ್ನು ರಕ್ಷಿಸದೇ ಬಲಿ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಇಂಟಿಲಿಜೆಂಟ್ ವರದಿ ಗೃಹ ಸಚಿವ ಅಮಿತ್ ಷಾ ರವರಿಗೆ ಸಿಗುವುದಿಲ್ಲವೇ, ಸೈನಿಕರ ಬಲಿಯಾಗುವುದು ತಿಳಿದಿಲ್ಲವೆಂದರೆ ಇವರದು ಮುಟ್ಟಾಳ ಸರ್ಕಾರವೇ ಇರಬೇಕು. ಮೋದಿ ಇನ್ನೊಮ್ಮೆ ಪ್ರಧಾನಿಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ, ಪುಲ್ವಾಮಾ ದಾಳಿಯಾಗದಿದ್ದರೆ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.