ರಸ್ತೆ ದುರಸ್ತಿ ಪಡಿಸಿ, ಇಲ್ಲ ಹಣ ನಗರಸಭೆಗೆ ವರ್ಗಾವಣೆ ಮಾಡಿ: ಕೆ.ಶೇಷಾದ್ರಿ
Feb 11 2025, 12:47 AM ISTದುರಸ್ತಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿತ್ತು. ಆನಂತರ ಮತ್ತೊಂದು ಸಭೆಯಲ್ಲಿ ಜಲಮಂಡಳಿ ಕೈಗೊಳ್ಳಬೇಕಾದ ದುರಸ್ತಿಯನ್ನು ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ರಸ್ತೆ ದುರಸ್ತಿ ಕಾಮಗಾರಿ ನಡೆದೇ ಇಲ್ಲ ಎಂದು ನಗರಸಭಾ ಸದಸ್ಯರು ತುರ್ತು ಸಭೆಯಲ್ಲಿ ವಾದಿಸಿದರು.