ರಸ್ತೆ ಅಗಲೀಕರಣವೋ, ವರ್ತಕರ ಬೆದರಿಸುವ ತಂತ್ರವೋ
Dec 26 2024, 01:00 AM IST ನಗರದ ಪ್ರಮುಖ ಬಿ.ಡಿ ರಸ್ತೆಯ ಅಗಲೀಕರಣ ಮಾಡಲಾಗುತ್ತಿದೆ ಎಂಬ ಸಂಗತಿಯನ್ನು ಚಿತ್ರದುರ್ಗದ ಮಂದಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸುಮ್ನಿರಿ ಸರ್, ತಮಾಷೆಗೂ ಒಂದು ಮಿತಿ ಇದೆ ಎಂದು ಗೇಲಿ ಮಾಡುತ್ತಿದ್ದಾರೆ. ಇದು ರಸ್ತೆ ಅಗಲೀಕರಣವೋ ಅಥವಾ ವರ್ತಕರ ಬೆದರಿಸುವ ತಂತ್ರವೋ ಎಂದು ಬೇರೆಯದೇ ಒಳ ಹಾದಿಯ ನೆನಪಿಸುತ್ತಾರೆ. ಇಂತಹ ಅದೆಷ್ಟು ತೆರವು ಕಾರ್ಯಾಚರಣೆ ನೋಡಿದ್ದೇವೆ. ಏನೇನೋ ಮೀಟಿಂಗ್ ಆಗಿ, ಒಳ ಒಪ್ಪಂದ ನಡೆದು ಎಲ್ಲ ಸಲೀಸು ಆಗ್ತಾವೆ ಎಂಬುದು ಗೊತ್ತಿದೆ ಎನ್ನುತ್ತಾರವರು.