ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ನಾನು ಸುಮ್ಮನಿರಲ್ಲ. ಕ್ಷೇತ್ರದಲ್ಲಿ ಒಂದು ನಾನಿರಬೇಕು, ಇಲ್ಲ ಅಂತಹ ಅಧಿಕಾರಿಗಳಿರಬೇಕು. ನನಗೆ ಶಾಸಕ ಸ್ಥಾನ ದೊಡ್ದದಲ್ಲ. ನನ್ನ ಕಾರ್ಯಕರ್ತರೆ ನನಗೆ ದೊಡ್ಡವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅಬಕಾರಿ ಇಲಾಖೆಯಿಂದ ₹ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ - ಸಿಎಂ ಸಿದ್ದರಾಮಯ್ಯ ನೇರ ಸವಾಲು
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಎಲೆಕ್ಟೋರಲ್ ಬಾಂಡ್ ತರುವ ಮೂಲಕ ಇಡೀ ರಾಜಕೀಯ ವ್ಯವಸ್ಥೆ ಭ್ರಷ್ಟ ಮಾಡಿದ್ದಾರೆ. ಅಂಥವರಿಂದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಿಪ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ದ ಜನರಲ್ಲಿ ತಪ್ಪು ಕಲ್ಪನೆ ಮೂಡಲಿ ಎಂದು ರೈತರ ಮಠ,ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾಯಿಸಿಕೊಂಡು ರೈತರನ್ನು ವಂಚನೆ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದೆ
ಬಿಜೆಪಿಯವರ ಆಹ್ವಾನದ ಮೇರೆಗೆ ಯಾವುದೇ ಜೆಪಿಸಿ ಸಮಿತಿ ಸದಸ್ಯರಿಲ್ಲದೆ ಆಗಮಿಸಿರುವ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಭೇಟಿ ಕೇಂದ್ರ ಬಿಜೆಪಿಯವರ ವಕ್ಫ್ ವಿರುದ್ಧದ ಪೂರ್ವನಿಯೋಯೋಜಿತ ರಾಜಕೀಯ ದೊಂಬರಾಟ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ ಟೀಕಿಸಿದ್ದಾರೆ.