ಜಾಹೀರಾತು ದರ ನಿಗದಿಗೆ ರಾಜಕೀಯ ಪಕ್ಷಗಳ ಸಭೆ
Nov 20 2023, 12:45 AM ISTಮುಂಬರುವ ಲೋಕಸಭೆ ಚುನಾವಣೆ-೨೦೨೪ರ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮುದ್ರಣ ಮತ್ತು ವಿದ್ಯುನ್ಮಾನ ಜಾಹೀರಾತು ದರಗಳ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ರಘುನಂದನ್ ಮೂರ್ತಿ ಚರ್ಚಿಸಿ ದರ ಅಂತಿಮಗೊಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ನೀಡುವ ಟಿವಿ ಮಾಧ್ಯಮ, ರೆಡೀಯೋ ಹಾಗೂ ಪತ್ರಿಕಾ ಮಾಧ್ಯಮಗಳ ಚುನಾವಣಾ ಜಾಹೀರಾತುಗಳಿಗೆ ನಿಗದಿತ ದರ ನಿಗದಿಪಡಿಸುವ ಪೂರ್ವ ಸಿದ್ಧತಾ ಸಭೆ ನಡೆಯಿತು.