ಅರಸೀಕೆರೆ ನಗರಸಭೆ ಚುನಾವಣೆಯಂದೇ ಜೆಡಿಎಸ್ ಸದಸ್ಯ ರಾಜೀನಾಮೆ
Aug 23 2024, 01:00 AM IST ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಅರಸೀಕೆರೆ ನಗರಸಭೆಯ ೧೦ನೇ ವಾರ್ಡಿನ ಜೆಡಿಎಸ್ ಸದಸ್ಯರಾದ ಕೆ.ಎಂ. ಈಶ್ವರಪ್ಪ ಅವರು ಅರಸೀಕೆರೆ ನಗರಸಭೆಗೆ ಚುನಾವಣೆ ನಡೆದ ಗುರುವಾರದಂದೇ ಜಿಲ್ಲಾಧಿಕಾರಿಗಳಿಗೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.೧೦ನೇ ವಾರ್ಡಿನ ನಗರಸಭೆ ಸದಸ್ಯರಾಗಿರುವ ನಾನು ೨೦೧೮ ರಿಂದ ೨೦೨೪ರವರೆಗೂ ಪ್ರಮಾಣಿಕವಾಗಿ ಜೆಡಿಎಸ್ ಪಕ್ಷದಲ್ಲಿ ಇದ್ದು, ಇಲ್ಲಿನ ಜೆಡಿಎಸ್ ಮುಖಂಡರು ಮಾಡಿದ ಬೇಸರದಿಂದ ನಗರಸಭೆಯ ನನ್ನ ಸದಸ್ವತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.