ನುಗ್ಗೇಹಳ್ಳಿಯಲ್ಲಿ ಬಗೆಹರಿದ ರಸ್ತೆ ಸಮಸ್ಯೆ: ನಿಟ್ಟುಸಿರು ಬಿಟ್ಟ ರೈತರು
Jan 20 2024, 02:04 AM ISTನುಗ್ಗೇಹಳ್ಳಿ ಗ್ರಾಮದ ರೈತರು ತಮ್ಮ ತೋಟ ಹೊಲಗಳಿಗೆ ಹೋಗಲು ರಸ್ತೆ ಇಲ್ಲದೆ ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಕಂದಾಯ ಇಲಾಖೆ ರೈತ ಸಂಘ, ಗ್ರಾಮಸ್ಥರು ಜಮೀನಿನ ರೈತರ ಮನವೊಲಿಸುವ ಮೂಲಕ ಕಳೆದ 18 ವರ್ಷಗಳಿಂದ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ರಸ್ತೆ ಬಿಡಿಸಿಕೊಟ್ಟಿದ್ದಾರೆ. ಈ ಮೂಲಕ ಅನೇಕ ವರ್ಷಗಳ ಸಮಸ್ಯೆ ಬಗೆಹರಿದಂತಾಗಿದೆ.