ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನೇರ ಸಂಚಾರಕ್ಕೆ ಇಲಾಖೆ ಚಿಂತನೆ
Mar 26 2025, 01:37 AM ISTಹಾಲಿ ಮುಂಬೈ-ಗೋವಾ ವಂದೇ ಭಾರತ್ ರೈಲು ಮುಂಬೈನಿಂದ ಬೆಳಗ್ಗೆ 5.25 ಕ್ಕೆ ಹೊರಟು ಮಧ್ಯಾಹ್ನ 1.10 ಕ್ಕೆ ಗೋವಾ ತಲುಪುತ್ತದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ಅದು ಗೋವಾದಿಂದ ಮಂಗಳೂರಿಗೆ ಮುಂದುವರಿಯಲಿದೆ. ಸಂಜೆ 6.00 ಗಂಟೆಗೆ ಮಂಗಳೂರು ತಲುಪಲಿದೆ. ಅದೇ ರೀತಿ, ಮಂಗಳೂರು-ಗೋವಾ ವಂದೇ ಭಾರತ್ ರೈಲು ಬೆಳಗ್ಗೆ 8.30 ಕ್ಕೆ ಮಂಗಳೂರಿಂದ ಹೊರಟು ಮಧ್ಯಾಹ್ನ 1.10 ಕ್ಕೆ ಗೋವಾ ತಲುಪುತ್ತದೆ. ರೈಲು ಮುಂಬೈಗೆ ಮುಂದುವರಿದರೆ, ರಾತ್ರಿ 9.00 ಗಂಟೆಗೆ ಮುಂಬೈ ತಲುಪುವ ನಿರೀಕ್ಷೆ ಇದೆ.