ಜಮ್ಮು ಮತ್ತು ಕಾಶ್ಮೀರದ ಹಿರಿಮೆಗೆ ವಿಶ್ವಮಟ್ಟದ ಗರಿ ಮೂಡಿದ್ದು, ಎಂಜಿನಿಯರಿಂಗ್ ಅದ್ಭುತ, ಸ್ವತಂತ್ರ ಭಾರತದ ಎಂಜಿನಿಯರಿಂಗ್ ನಾವೀನ್ಯತೆ ಹಾಗೂ ನೈಪುಣ್ಯತೆಯನ್ನು ಜಗತ್ತಿಗೆ ಸಾರುವ ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ‘ಚೀನಾಬ್ ಕಮಾನು ಸೇತುವೆ’ ಅಧಿಕೃತ ರೈಲು ಸಂಚಾರ ಸೇವೆಗೆ ಸಜ್ಜಾಗಿದೆ.
ಬೆಂಗಳೂರು- ಹಾಸನ ನಡುವೆ ಸಂಚರಿಸುತ್ತಿರುವ ಇಂಟರ್ಸಿಟಿ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರಿಗೆ ಮನವಿ ಮಾಡಿದ್ದಾರೆ.
ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರಿನಿಂದ ಪ್ರಯಾಗ್ರಾಜ್ಗೆ ವಿಶೇಷ ಏಕಮುಖ ಎಕ್ಸ್ಪ್ರೆಸ್ ರೈಲು (06215) ಓಡಿಸಲಿದೆ.