ಯೋಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
Nov 24 2024, 01:47 AM ISTಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡಲು ಆಸಕ್ತಿ, ಶ್ರದ್ಧೆ, ಬಹಳ ಮುಖ್ಯವಾದದ್ದು. ಯೋಗಾಸನ ಮಾಡುವುದರಿಂದ ನಮ್ಮ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ, ಯೋಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಲವಾರು ರೋಗಗಳಿಗೆ ಔಷಧಿಯಾಗಿ ನಮಗೆ ಶಕ್ತಿ ತುಂಬುತ್ತದೆ, ಯೋಗ ವ್ಯಕ್ತಿಯ ಮಾನಸಿಕ ಸ್ಥಿತಿ ಹೆಚ್ಚಾಗಿಸಿ ಚೈತನ್ಯಶೀಲತೆಯಿಂದ ಇರುವಂತೆ ಮಾಡುತ್ತದೆ. ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಟಿಯಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಮಾಡುವುದು ಬಹಳ ಮುಖ್ಯವಾದದ್ದು ಎಂದು ಶೋಭಾ ಯೋಗರಾಜ್ ತಿಳಿಸಿದರು.