ಕ್ಯಾನ್ಸರ್ ರೋಗ ಪತ್ತೆಗೆ ಎಐ ಸಹಕಾರಿ
Jul 07 2024, 01:18 AM ISTವೈದ್ಯವಿಜ್ಞಾನವು ಸಾಕಷ್ಟು ಬದಲಾವಣೆಗೊಳ್ಪಡುತ್ತಿದ್ದು, ಮುಂಬರುವ ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಾಮುಖ್ಯತೆ ಪಡೆಯಲಿದೆ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್ನ ನಿಖರವಾದ ರೋಗಪತ್ತೆಗೆ ಸಹಕಾರಿಯಾಗಲಿದೆ. ಆದರೆ, ಚಿಕಿತ್ಸೆಯಲ್ಲಿ ಕುರುಡು ನಂಬಿಕೆ ಮತ್ತು ಅವಲಂಬನೆ ಇರಬಾರದು ಎಂದು ಪದ್ಮಶ್ರೀ ಪುರಸ್ಕೃತ, ಹಿರಿಯ ಕ್ಯಾನ್ಸರ್ ತಜ್ಞವೈದ್ಯ ದೆಹಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟನ ಸಂಸ್ಥಾಪಕ ನಿರ್ದೇಶಕ ಡಾ.ರಾಜೇಶ ಕೆ.ಗ್ರೋವರ ಹೇಳಿದರು.